About Us
|
ದಿನಾಂಕ 21-08-2010 ರಂದು ಪುರಸಭೆ ಕಛೇರಿಗೆ ನೂತನ ಅಧ್ಯಕ್ಷರ ಆಯ್ಕೆ ಸ್ಥಳೀಯ ಪುರಸಭೆಯ ಅಧ್ಯಕ್ಷರಾಗಿ ಶ್ರೀ ಸಿ. ರಾಜಣ್ಣ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಿನಾಂಕ 21-08-2010 ರಂದು ಪುರಸಭೆ ಕಛೇರಿಗೆ ನೂತನ ಉಪಾಧ್ಯಕ್ಷರ ಆಯ್ಕೆ ಸ್ಥಳೀಯ ಪುರಸಭೆಯ ಅಧ್ಯಕ್ಷರಾಗಿ ಶೀಮತಿ ಶೀಲಾವತಿ ರಾದಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಿನಾಂಕ 08-07-2010 ರಂದು ಪುರಸಭೆ ಕಛೇರಿಗೆ ನೂತನ ಸ್ಥಾಯಿ ಸಮಿತಿ ಅದ್ಯಕ್ಷರ ಆಯ್ಕೆ ಸ್ಥಳೀಯ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀ ಎಂ.ಮೃತ್ಯುಂಜಯ(ಮುತ್ತು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
|
| Budget 2010-11 of the Town has been launched. |
|
” ನಮ್ಮ ಮನೆ ಯೋಜನೆ ” ಈ ಮೂಲಕ ಹೊಸಕೋಟೆ ಟೌನಿನಲ್ಲಿ ವಾಸಿಸುವ ಸಮಸ್ತ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಕೇಂದ್ರ
ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನ ಇಲಾಖೆಯು ಆರ್ಥಿಕವಾಗಿ ಅಶಕ್ತ ಹಾಗೂ ಕಡಿಮೆ ಆದಾಯ
ಗುಂಪಿನ ಬಡ ಜನರಿಗೆ “ನಮ್ಮ ಮನೆ ಯೋಜನೆಯಡಿ “ಮನೆ ನಿರ್ಮಾಣ ಮಾಡಿಕೊಳ್ಳಲು, ಬಡ ಫಲಾನುಭವಿಗಳಿಂದ
ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್ಚಿನ ವಿವರಗಳಿಗೆ ಪುರಸಭೆ ಕಛೇರಿಯನ್ನು ಸಂಪರ್ಕಿಸಿ.
|
|
ಕರ್ನಾಟಕ ಮೂಲ ಸೌಕರ್ಯ ಅಭಿವೃದ್ದಿ ಹಾಗೂ ಹಣಕಾಸು ಯೋಜನೆಯ ವಿಚಾರದ ಬಗ್ಗೆ ದಿನಾಂಕ : 05-01- 2010 ರಂದು ಬೆಳಿಗ್ಗೆ 11-00 ಘಂಟೆಗೆ ಕೆ.ಎಂ.ಆರ್.ಪಿ. ಯೋಜನೆಯ ವಿಚಾರದಲ್ಲಿ ಪಾಲುದಾರ (Stake Holders) ರವರ ಕಾರ್ಯಾಗಾರವನ್ನು SMEC ಕನ್ಸಲ್ಟೆಂಟ್ ರವರು ಹೊಸಕೋಟೆಯ ಪುರಸಭೆ ವತಿಯಿಂದ ಹೆಚ್.ಜೆ.ಎಸ್.ಎಸ್. ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರಕ್ಕೆ ಟೌನಿನ ಮುಖಂಡರು ಹಾಗೂ ಸಾರ್ವಜನಿಕರು ಟೌನಿನ ಸಮಸ್ತ ಅಭಿವೃದ್ದಿ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. |
|
ಮಾನ್ಯ ಮುಖ್ಯ ಮಂತ್ರಿಯವರ ಸಣ್ಣ ಮತ್ತು ಮದ್ಯಮ ಪಟ್ಟಣಗಳ ಅಭಿವೃದ್ದಿ ಕಾರ್ಯಕ್ರಮ ಯೋಜನೆಯಡಿ ಹೊಸಕೋಟೆ ಪುರಸಭೆಗೆ ರೂ 5.00 ಕೋಟಿಗಳು ಬಿಡುಗಡೆಯಾಗಿದ್ದು ಈ ಅನುದಾನಕ್ಕೆ ಕೊಳಚೆ ಪ್ರದೇಶಗಳ ಉನ್ನತೀಕರಣ ಕಾಮಗಾರಿಗಳು, ರಸ್ತೆಗಳು, ಪಾದಚಾರಿ ಮಾರ್ಗ ಮತ್ತು ರಸ್ತೆ ಇಕ್ಕೆಲಗಳ ಚರಂಡಿ, ಬೀದಿ ದೀಪಗಳು, ಇತರೆ ಮೂಲಭೂತ ಕಾಮಗಾರಿಗಳನ್ನೊಳಗೊಂಡ ಕ್ರಿಯಾ ಯೋಜನೆ ತಯಾರಿಸಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿ ಪಡೆಯಲಾಗಿದ್ದು . ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿರುತ್ತದೆ. |
![]()
|
ಹೊಸಕೋಟೆ ಪಟ್ಟಣದ ವ್ಯಾಪ್ತಿಯಲ್ಲಿ ಭೌಗೋಳಿಕ ಮಾಹಿತಿ ಆಸ್ತಿ ತೆರಿಗೆ ಪದ್ದತಿ ಅನುಷ್ಟಾನದ ಕ್ಷೇತ್ರ ಮಟ್ಟದ ತರಬೇತಿ ಕಾರ್ಯಾಗಾರವು ದಿನಾಂಕ : 13-07-2009 ರಿಂದ 18-07-2009 ರವರೆಗೆ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ಮಾನ್ಯ ಶ್ರೀ ನಸರತುಲ್ಲಾ ಷರೀಫ್, Deputy Director, MRC, Bangalore ರವರು ಉದ್ಘಾಟಿಸಿದರು. ಪುಸಭೆಯ ಅಧ್ಯಕ್ಷರಾದ ಶ್ರೀ ಎನ್. ನಾಗರಾಜ್ ರವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಪುಂಜಾರವರು ಸರ್ವೆ ಆಫ್ ಇಂಡಿಯಾ ಹಾಗೂ ಅವರ ಸಹೋದ್ಯೋಗಿಗಳು ಆಗಮಿಸಿದ್ದರು ಈ ತರಭೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ತಿಗಳ ವಿವರ
|
|
|
| On June 5th "The World's Environment Day" In Hosakote town the big Drain called Nala Galli was cleaned up by removing the wastage and Silt. |
![]() |
|
ದಿನಾಂಕ: 09-05-2009 ರಂದು ಇತಿಹಾಸ ಪ್ರಸಿದ್ದ ಶ್ರೀ ಅವಿಮುಕ್ತೇಶ್ವರಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಹಾಗೂ ರಾತ್ರಿ ಶ್ರೀ ಧರ್ಮರಾಯಸ್ವಾಮಿ ಶ್ರೀ ದ್ರೌಪತಮ್ಮ ರವರ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. |
About I.E.C Activities Snapshots
![]() |
![]() |
From 30-06-2009 PGR is Online ಕೆ.ಎಂ.ಆರ್.ಪಿ ಯೋಜನೆಯಡಿಯಲ್ಲಿ ಪುರಸಭೆ ಕಛೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಮತ್ತು ಪರಿಹಾರ ಕೇಂದ್ರವನ್ನು ಸ್ಥಾಪಿಸದೆ.ಸಾರ್ವಜನಿಕರು ಸತತವಾಗಿ 24ಘಂಟೆಗಳ ಕಾಲ ತಮ್ಮ ದೂರುಗಳನ್ನು ದೂರವಾಣಿ ಮುಖಾಂತರ ಅಥವಾ ಅಂತರ್ಜಾಲದಲ್ಲಿ ನೊಂದಾಯಿಸಬಹುದು ಅಥವಾ ಕಛೇರಿಯಲ್ಲಿ ತಮ್ಮ ದೂರನ್ನು ನೊಂದಾಯಿಸಿ ರಸೀಧಿಯನ್ನು ಪಡೆಯಬಹುದಾಗಿದೆ. |
|
Birth and Death online application was launched on 30-08-2008. The citizens can view the details of birth and death from the year 1997 to 2007(Entry of records from the year 2008 to till date is under process) .To have access OR visit the link Birth/Death
ದಿನಾಂಕ: 30-08-2008 ರಂದು ಜನನ ಮತ್ತು ಮರಣ ದಾಖಲೆಗಳನ್ನು ಆನ್ ಲೈನ್ ಮಾಡಲಾಗಿದೆ. ಜನವರಿ 1997 ರಿಂದ ಇವತ್ತಿನವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಆನ್ ಲೈನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಪುರಸಭೆ ಕಛೇರಿಯಲ್ಲಿ ಸಂಪರ್ಕಿಸಿ, ಮೇಲೆ ಕೊಟ್ಟಿರುವ ವೆಬ್ ಪೇಜ್ ಅನ್ನು ವೀಕ್ಷಿಸಿ:- |
|
Hosakote is a Town Municipal Council (TMC) of Bangalore Rural District. It is situated along the Bangalore- Chennai Highway NH-4, at a distance of 27 Kms from Bangalore. It is administered by the District Commissioner, Bangalore Rural District, Bangalore. The Town Municipal is ruled by the Administrator and Chief Officer. The Administrator is elected through the members of the ruling party after the Urban Local Bodies Election . The town consists of 23 wards which are maintained by the same number of Councillors.
ಹೊಸಕೋಟೆ ಸ್ಥಳೀಯ ಸಂಸ್ಥೆಯು 1906 ರಲ್ಲಿ ಸ್ಥಾಪನೆಯಾಯಿತು. ಹೊಸಕೋಟೆ ಪುರಸಭೆಯು ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೆಂಗಳೂರಿನಿಂದ 27 ಕಿ.ಮೀ. ದೂರದಲ್ಲಿದೆ. ಈ ಪಟ್ಟಣದಲ್ಲಿ 2001 ರ ಸಮೀಕ್ಷೆಯಂತೆ ಜನಸಂಖ್ಯೆಯು ಸುಮಾರು 36,364 ಇರುತ್ತದೆ. ಹೊಸಕೋಟೆ ಪುರಸಬೆಯಲ್ಲಿ 23 ವಾರ್ಡ್‌ಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಸದಸ್ಯರು ಇರುತ್ತಾರೆ. ಹೊಸಕೋಟೆ ಪುರಸಭೆಯನ್ನು ಒಂದು ಮಾದರಿ ಪುರಸಭೆಯೆಂದು ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರು ದಿನಾಂಕ 04-06-2006 ರಂದು ಬಿರುದು ನೀಡಿರುತ್ತಾರೆ. ಹೊಸಕೋಟೆಯಲ್ಲಿ ಎಂ.ವಿ.ಜೆ ಮೆಡಿಕಲ್ ಕಾಲೇಜು ಹಾಗೂ ಸಂಶೋಧನ ಕೇಂದ್ರವು ತುಂಬ ಪ್ರಸಿದ್ಧಿಯನ್ನು ಪಡೆದಿದೆ. ಇದಲ್ಲದೆ ಹೊಸಕೋಟೆಯ ಸುತ್ತಾಮುತ್ತಾ ಹಲವಾರು ಕೈಗಾರಿಕೆಗಳು ಇದ್ದು ಉದ್ಯೋಗಾಂಕ್ಷಿಗಳಿಗೆ ಉತ್ತಮ ತಾಣವಾಗಿದೆ. ಹೊಸಕೋಟೆ ಟೌನ್ ತರಕಾರಿ ಬೆಳೆಗೆ ಪ್ರಸಿದ್ಧವಾಗಿದೆ
|
"The achievements of an Organization are the results of the Combined Effort of each individual"
Comments and Suggestions write to:
Town Municipal Council,
Old Bus Stand Road,
Hosakote-562114
Bangalore Rural District.
Contact No: 7931221
Email id: itstaff_ulb_hosakote@yahoo.com







